ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ದಿನಕ್ಕೆ 3 ಕೆಜಿ ಮೆಣಸಿನ ಕಾಯಿ ತಿಂತಾನೆ ಈ ಭೂಪ!

ಸಾಂಬಾರಿಗೆ ನಾಲ್ಕು ಮೆಣಸಿನಕಾಯಿ ಹಾಕಿದ್ದಾಗಲೇ ನಾವೆಲ್ಲಾ 'ಅಯ್ಯೋ ಖಾರ..' ಅಂತ ಗಡಾಯಿಗಟ್ಟಲೆ ನೀರು ಕುಡಿಯುತ್ತೇವೆ. ಅಂಥದ್ದರಲ್ಲಿ ಇಲ್ಲೊಬ್ಬ ಭೂಪ ದಿನಕ್ಕೆ ಏನಿಲ್ಲವೆಂದರೂ 3 ಕೆಜಿ ಖಾರದ ಮೆಣಸಿನಕಾಯಿಯನ್ನು ನಿರಾಯಾಸವಾಗಿ ತಿಂದುಬಿಡುತ್ತಾನೆ. ಈತನಿಗೆ 'ಮೆಣಸಿನಕಾಯಿ ರಾಜ' ಅನ್ನೋ ಹೆಸರಿದೆ.


ಮಧ್ಯಪ್ರದೇಶ ಉಜ್ಜೈನಿಯವರಾದ ಪ್ಯಾರೆ ಮೋಹನ್‌ಗೆ ಖಾರ ಅಂದ್ರೆ ಕ್ಯಾರೇ ಇಲ್ಲ. ಇವರ ಮುಂದೆ ಕೆಜಿಗಟ್ಟಲೆ ಮೆಣಸಿನಕಾಯಿ ಇಟ್ಟು ತಿನ್ನು ಅಂದರೆ; ನಾವೆಲ್ಲ ಫಿಂಗರ್ ಚಿಪ್ಸ್ ತಿನ್ನೋ ರೀತೀಲಿ ಅಷ್ಟೂ ಮೆಣಸಿನ ಕಾಯಿಗಳನ್ನ ತಿಂದುಬಿಡುತ್ತಾರೆ. ಯಾವುದೇ ಬಗೆಯ, ಎಷ್ಟೇ ಖಾರದ ಮೆಣಸು ತಂದುಕೊಟ್ಟರೂ ಅದನ್ನು ಮೋಹನ್ ಸಲೀಸಾಗಿ ತಿನ್ನುತ್ತಾರೆ.


ಬಗೆ ಬಗೆ ತಿನಿಸು, ವಸ್ತು ತಿನ್ನುವ ವಿಚಿತ್ರ ಖಾಯಿಲೆ ಕೆಲವರಿಗಿರುತ್ತದೆ. ಜೇಡಿ ಮಣ್ಣು, ಪೇಸ್ಟು, ಬಳಪದ ಕಡ್ಡಿ, ಕಾಫೀ ಹಣ್ಣು, ಹುಣಸೇ ಬೀಗ, ಸೋಪು ತಿಂದು ಸೈ ಎನಿಸಿಕೊಂಡವರೂ ಈ ಜಗತ್ತಿನಲ್ಲಿ ಇದ್ದಾರೆ. ಆದರೆ ಖಾರದ ಮೆಣಸು ತಿನ್ನೋದಂದ್ರೆ ತಮಾಷೇನಾ?


ಪ್ಯಾರೆ ಮೋಹನ್ ಅವರು ಕೆಜಿ ಕೆಜಿ ಮೆಣಸು, ಮೆಣಸಿನ ಹುಡಿ ತಿಂದರೂ ಆ ಬಳಿಕ ಒಂದೇ ಒಂದು ಗುಟುಕು ಕೂಡ ನೀರು ಕುಡಿಯೋಲ್ಲ. ಇವರಿಗೆ ಖಾತರದ ರುಚಿಯೇ ಗೊತ್ತಾಗೋಲ್ಲವೋ ಏನೋ. ಪಾಪ ಮೋಹನ್ ಅವರ ಹೆಂಡತಿ ತನ್ನ ಗಂಡನಿಗೆ ಖಾರದಡುಗೆ ಬಡಿಸಬೇಕು ಅಂತ ಆಸೆಯಿಟ್ಟುಕೊಂಡರೆ ಅದೇನು ಸರ್ಕಸ್ಸು ಮಾಡಬೇಕಾಗಬಹುದೋ ಆ ದೇವರೇ ಬಲ್ಲ!

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು